ನಾಳೆಯಿಂದ‘ಡವ್’ ಹೊಡೆಯಲು ಅನೂಪ್ ಬರುತ್ತಿದ್ದಾನೆ
Posted date: 08 Thu, Oct 2015 – 10:08:51 AM

ಕನ್ನಡ ಚಿತ್ರ ರಂಗದ ಹಿರಿಯ ನಿರ್ಮಾಪಕ ಸಾ ರಾ ಗೋವಿಂದು ಅವರ ಪುತ್ರ ಅನೂಪ್ ಸಾ ರ ಗೋವಿಂದು ‘ಡವ್’ ಸಿನಿಮಾ ಮುಖಾಂತರ ಪದಾರ್ಪಣೆ ಮಾಡಿರುವ ಬಹು ನಿರೀಕ್ಷಿತ ಚಿತ್ರ ನಾಳೆಯಿಂದ ಬಿಡುಗಡೆ ಆಗುತ್ತಿದೆ. ಸಾಕಷ್ಟು ತಯಾರಿ ಪಡೆದುಕೊಂಡೆ ಅನೂಪ್ ‘ಡವ್’ ಮೂಲಕ ಅಲೆಮಾರಿ ಸಂತು ಅವರ ನಿರ್ದೇಶನದಲ್ಲಿ ಬಿ ಕೆ ಶ್ರೀ ನಿವಾಸ್ ಅವರ ನಿರ್ಮಾಣ ಸಾರಥ್ಯದಲ್ಲಿ ರಜತ ಪರದೆ ಮೇಲೆ ರಾರಾಜಿಸಲಿದ್ದಾನೆ.

ಬೆಂಗಳೂರು, ಕೆ ಜಿ ಎಫ್, ಮೈಸೂರು, ಧನುಷ್ಕೋಟಿ, ಹಾಗೂ ಇನ್ನಿತರ ಸ್ಥಳಗಳಲ್ಲಿ ‘ಡವ್’ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ.
ವ್ಯಾಪಾರಿ ಚಿತ್ರ ಹಾಗೂ ಕಲಾತ್ಮಕ ಚಿತ್ರಗಳನ್ನು ಮಾಡುತ್ತಾ ಬಂದಿರುವ ಸಹೃದಯಿ ಬಿ ಕೆ ಶ್ರೀನಿವಾಸ್ ಹಲವು ಬಗೆಯ ವಿಶೇಷಗಳಿಂದ ಕೂಡಿರುವ ಚಿತ್ರ ‘ಡವ್’ಅದ್ಧೂರಿ ಚಿತ್ರ ಎನ್ನುತ್ತಾರೆ.
ಅನೂಪ್ ಹಾಗೂ ಅದಿತಿ ರಾವ್ ಅವರ ಪ್ರಥಮ ಚಿತ್ರ.  ರಾಕೇಶ್ ಅಡಿಗ, ಮದಾಲಸ ಶರ್ಮ, ಡೇನಿಯಲ್ ಬಾಲಾಜಿ, ಅವಿನಾಶ್,ಜೈ ಜಗದೀಶ್, ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ರಂಗಾಯಣ ರಘು, ವೀಣ ಸುಂದರ್, ನವನೀತ,  ಕರಿ ಸುಬ್ಬು, ಮೋಹನ್, ಮಂಜು ಮಾಂಡವ್ಯ, ಉಮೇಶ್ಕುಮಾರ್, ಬಾಬು, ಸುಧಿ, ವಿಜಯಸಾರಥಿ, ಸುನೇತ್ರ ಪಂಡಿತ್,  ವಿಕ್ಟರಿ ವಾಸು, ಮಾಂಬಳ್ಳಿ,  ಹಾಗೂ ಇತರರು ಇದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ, ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಮಂಜು ಮಾಂಡವ್ಯ ಅವರ ಸಂಭಾಷಣೆ, ಮಾಸ್ ಮಾದ ಅವರ ಸಾಹಸ,ಉಮೇಶ್ ಅವರ ಮೇಲ್ವಿಚಾರಣೆ ಇದೆ.


 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed